Vipassana
As taught by S.N. Goenka
Meditation
in the tradition of Sayagyi U Ba Khin
ಯುವಜನರಿಗಾಗಿ ಆನಾಪಾನ ಅಪ್ಲಿಕೇಶನ್
ವೈಶಿಷ್ಟ್ಯಗಳು
- ಕನಿಷ್ಟ ಒಂದು ಆನಾಪಾನ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಸಿದ್ಧಪಡಿಸಲಾಗಿದೆ.
- ನಿಮ್ಮ ಭಾಷೆಯಲ್ಲಿ ಧ್ವನಿ ಮುದ್ರಿತವಾಗಿರುವ ಸೂಚನೆಗಳನ್ನು ಕೇಳುತ್ತಾ ಹತ್ತು ನಿಮಿಷಗಳ ಕಾಲ ಆನಾಪಾನ ಧ್ಯಾನದ ಅಭ್ಯಾಸ ಮಾಡುವುದು.
- ಕೇವಲ ಘಂಟೆನಾದದ ಸೂಚನೆಯೊಂದಿಗೆ ಹತ್ತು ನಿಮಿಷಗಳ ಕಾಲ ಆನಾಪಾನ ಧ್ಯಾನದ ಅಭ್ಯಾಸ ಮಾಡುವುದು (ನಿಮಗೆ ಆನಾಪಾನ ಸೂಚನೆಗಳು ಸಮರ್ಪಕವಾಗಿ ತಿಳಿದಿದ್ದರೆ).
- ಅನಾಪಾನ ಸರಿಯಾಗಿ ಅಭ್ಯಾಸ ಮಾಡುವುದರ ಬಗ್ಗೆ ಓದಿ ತಿಳಿದುಕೊಳ್ಳುವುದು.
- ಆನಾಪಾನ ಧ್ಯಾನದ ನಂತರ ಮಾಡುವ ಪ್ರೀತಿ, ಕರುಣಾ ಭಾವವನ್ನು ಹಂಚುವ ಮೈತ್ರಿ ಧ್ಯಾನದ ಅಭ್ಯಾಸದ ಬಗ್ಗೆ ಓದಿ ತಿಳಿದುಕೊಳ್ಳುವುದು.
- ಧ್ಯಾನಕ್ಕೆ ಅಡಿಪಾಯವಾಗಿರುವ ಪಂಚ ಶೀಲಗಳ ಬಗ್ಗೆ ತಿಳಿದುಕೊಳ್ಳುವುದು.
- ಪಂಚ ಶೀಲಗಳೊಂದಿಗೆ ಆನಾಪಾನ ಧ್ಯಾನ ಮಾಡುವುದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು.
- ನಿಮ್ಮ ಸಮೀಪ ಅಥವಾ ಜಗತ್ತಿನ ಬೇರೆಡೆ ಲಭ್ಯವಿರುವ ಮಕ್ಕಳ ಅಥವಾ ಹದಿಹರೆಯದವರ ಧ್ಯಾನ ಶಿಬಿರಗಳ ಬಗ್ಗೆ ಹುಡುಕಿ ತಿಳಿದುಕೊಳ್ಳುವುದು.
- ಆನಾಪಾನ ಧ್ಯಾನ ಶಿಬಿರಗಳ ಬಗೆಗಿನ ವಿಡಿಯೋಗಳ ವೀಕ್ಷಣೆ.
- ಮಕ್ಕಳ ಜಾಗತಿಕ ವೆಬ್ ಸೈಟಿಗೆ ಹೋಗಲು ಮಾರ್ಗದರ್ಶನ.